ಮಹಮ್ಮದ್ ಅಲಿ
	1964. ಮುಷ್ಠಿಯುದ್ಧಪಟು. ಜಾಗತಿಕ ಹೆವಿವೇಯ್ಟ್ ವಿಭಾಗದಲ್ಲಿ ಮೂರು ಬಾರಿ ಚಾಂಪಿಯನ್ ಎನಿಸಿಕೊಂಡ ಮಹಮ್ಮದ್ ಅಲಿ ಹಜ್ ಅಮೆರಿಕದ ಊಯಿವಿಲ್‍ನಲ್ಲಿ 1942 ಜನವರಿ 17ರಂದು ಜನಿಸಿದರು. ಇವರು ಕಡ್ಡಾಯವಿರಲಿಲ್ಲ. ಈ ಮಿಲಿಟರಿ ಸೇವೆಯನ್ನು ತಪ್ಪಿಸುವುದಕ್ಕೋಸ್ಕರ ಇವರು ಕ್ರೈಸ್ತಧರ್ಮದಿಂದ ಇಸ್ಲಾಮ್ ಧರ್ಮಕ್ಕೆ ಮತಾಂತರ ಹೊಂದಿ ಮಹಮದ್ ಅಲಿ ಆದರು.

	25, ಫೆಬ್ರುವರಿ 1964ರಲ್ಲಿ ಇವರು ಪ್ರಥಮ ಬಾರಿಗೆ ಸನ್ನಿ ಲಿಸ್ಟನ್ ಅವರನ್ನು ಸೋಲಿಸಿ ಜಾಗತಿಕ ಹೆವಿವೇಯ್ಟ್ ಚಾಂಪಿಯನ್ ಆದರು, 1967 ಏಪ್ರಿಲ್ 28ರಂದು ಜಾಗತಿಕ ಬಾಕ್ಸಿಂಗದ ಚಾಂಪಿಯನ್‍ಷಿಪ್‍ನ ಅಧಿಕಾರ ವರ್ಗ ಇವರಿಂದ ಶಿಸ್ತಿನ ಕ್ರಮವಾಗಿ ಪ್ರಶಸ್ತಿಯನ್ನು ಕಿತ್ತುಕೊಂಡಿತು. ಪುನಃ 1974ರಲ್ಲಿ ಅಕ್ಟೋಬರ್ 30ರಂದು ಜಾರ್ಜ್ ಫೋರ್‍ಮನ್‍ರನ್ನು ಸೋಲಿಸಿ ಮರಳಿ ಚಾಂಪಿಯನ್ ಆದರು. ಅನಂತರ 15, ಫೆಬ್ರುವರಿ 1978ರಲ್ಲಿ ಅಯೋನ ಸ್ಪಿಂಕ್ಸ್ ಅವರಿಗೆ ಸೋತರೂ ಪುನಃ ಅದೇ ವರ್ಷ ಸೆಪ್ಟೆಂಬರ್ 15ರಂದು ಸ್ಪಿಂಕ್ಸ್ ಅವರನ್ನೇ ಸೋಲಿಸಿ ಮರಳಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಬೊಗಳೆದೊರೆ. ಜಂಬದ ಕೋಳಿ ಎಂಬೆಲ್ಲ ಹೆಸರಿನಿಂದ ಕರೆಯಲ್ಪಡುತ್ತಿದ್ದ ಮಹಮ್ಮದ್ ಅಲಿ ಅವರು ಪ್ರಪಂಚದ ಅಗ್ರಮಾನ್ಯ ಬಾಕ್ಸಿಂಗ್ ಪಟುಗಳ ಸ್ಥಾನಕ್ಕೆ ಸೇರಿದವರಾಗಿದ್ದಾರೆ, 1980 ಮಾಸ್ಕೊಒಲಿಂಪಿಕ್ಸ್ ಹೆವಿವೆಟ್ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಇವರಿಗೆ ಭಾಗವಹಿಸಲು ಅವಕಾಶವನ್ನು ಕೊಡಲಿಲ್ಲ. ಏಕೆಂದರೆ ಅಮೆರಿಕ ದೇಶವೇ ಆ ಒಲಿಂಪಿಕ್ಸನ್ನು ಬಹಿಷ್ಕರಿಸಿತ್ತು. ಇತ್ತೀಚೆಗೆ ಇವರು ಜಾಗರಿಕ ಹೆವಿವೇಯ್ಟ್ ಬಾಕ್ಸಿಂಗ್‍ನಿಂದ ತಮ್ಮ ನಿವೃತ್ತಿಯನ್ನು ಘೋಷಿಸಿಕೊಂಡಿದ್ದಾರೆ.

	ಇವರು ವಿವಾದಾತ್ಮಕ ವ್ಯಕ್ತಿ ಎನಿಸಿದ್ದಾರೆ. ಅಖಾಡದಲ್ಲಿ ಇವರ ಅಟ್ಟಹಾಸ ಹೆಗ್ಗಳಿಕೆ ಪ್ರದರ್ಶನಗಳು ಸರ್ವೇಸಾಮಾನ್ಯ. ಸುಮಾರು 2.57 ಮೀ ಎತ್ತರದ ಸು.105 ಕೆ.ಜೆ. ತೂಕದ ಮಹಮ್ಮದ್ ಆಲಿ ನಯವಾದ ನರ್ತನದಂಥ ನಡಗೆ ಮತ್ತು ಬಿರುಸಿನ ಹೊಡೆತಗಳಿಗೆ ಹೆಸರಾಗಿದ್ದಾರೆ.  								
(ಬಿ,ಎಸ್.ಬಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ